IPL ಇತಿಹಾಸದಲ್ಲೇ ಅತಿದೊಡ್ಡ ಮಾರಾಟ: 16,000 ಕೋಟಿ ರೂ ಗೆ RCB ಸೇಲ್; ಹೊಸ ಮಾಲೀಕರು ಯಾರು ಗೊತ್ತಾ?

Madhya Pradesh:

Font size:

ಭಾರತೀಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್‌ನ ಬೋಲ್ಟ್ ವೆಂಚರ್ಸ್ ಮತ್ತು ಯುಎಸ್ ಮೂಲದ ಬ್ಲಾಕ್‌ಸ್ಟೋನ್ ಒಳಗೊಂಡಿರುವ ಕನ್ಸೋರ್ಟಿಯಂ ಹೊಸ ಮಾಲೀಕರಾಗಿದ್ದಾರೆ

ನವದೆಹಲಿ: ಐಪಿಎಲ್ ಹಾಲಿ ಚಾಂಪಿಯನ್ ಆರ್ ಸಿಬಿ ಕೊನೆಗೂ ಮಾರಾಟವಾಗಿದೆ. ಕುಮಾರ್ ಮಂಗಲಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಕನ್ಸೋರ್ಟಿಯಂ (ಒಕ್ಕೂಟ) ಮಂಗಳವಾರ ಅದರ ಹೊಸ ಮಾಲೀಕರಾಗಿದ್ದಾರೆ. ಭಾರತೀಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್‌ನ ಬೋಲ್ಟ್ ವೆಂಚರ್ಸ್ ಮತ್ತು ಯುಎಸ್ ಮೂಲದ ಬ್ಲಾಕ್‌ಸ್ಟೋನ್ ಒಳಗೊಂಡಿರುವ ಕನ್ಸೋರ್ಟಿಯಂ ಸುಮಾರು 1.78 ಶತಕೋಟಿ ಡಾಲರ್ (16,000 ಕೋಟಿಗಿಂತ ಹೆಚ್ಚು) ಪಾವತಿಸಲಿದೆ ಎಂದು ತಿಳಿದುಬಂದಿದೆ. ಆರ್ ಸಿಬಿಯ ಶೇ. 100 ರಷ್ಟು ಮಾಲೀಕತ್ವದ ಪಾಲು ಪಡೆಯಲು ಈ ಕಂಪನಿಗಳು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ನೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ. ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಸತ್ಯನ್ ಗಜ್ವಾನಿ ಫ್ರಾಂಚೈಸಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಐಪಿಎಲ್ ಜಾಗತಿಕ ಕ್ರೀಡಾ ಪವರ್ ಹೌಸ್ ಆಗಿ ಬೆಳೆದಿದ್ದು, ಭಾರತೀಯ ಕ್ರಿಕೆಟ್‌ನ ಸ್ವರೂಪವನ್ನು ಬದಲಾಯಿಸಿದೆ. ಆಧುನಿಕ ಕ್ರೀಡೆಯಲ್ಲಿ ಅತ್ಯಂತ ಬಲವಾದ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಆರ್‌ಸಿಬಿ, ಆದಿತ್ಯ ಬಿರ್ಲಾ ಗ್ರೂಪ್‌ಗೆ ತನ್ನ ಪರಂಪರೆ ವಿಸ್ತರಿಸಲು ಒಂದು ವಿಶಿಷ್ಟ ವೇದಿಕೆಯನ್ನು ನೀಡುತ್ತದೆ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಅಧ್ಯಕ್ಷ ಸತ್ಯನ್ ಗಜ್ವಾನಿ, "ಆರ್‌ಸಿಬಿ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಮತ್ತು ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿದೆ. ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ನಮ್ಮ ಪಾಲುದಾರರೊಂದಿಗೆ ನಾವು ಆರ್‌ಸಿಬಿಯನ್ನು ಜಾಗತಿಕ ಕ್ರೀಡಾ ಸಂಸ್ಥೆಯಾಗಿ ಕಟ್ಟುತ್ತೇವೆ" ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನಾ ರಾಜಸ್ಥಾನ್ ರಾಯಲ್ಸ್ ತಂಡವನ್ನು ಯುಎಸ್ ಮೂಲದ ಕಲ್ ಸೋಮಾನಿ ನೇತೃತ್ವದ ಕನ್ಸೋರ್ಟಿಯಂ USD 1.63 ಶತಕೋಟಿ (ಅಂದಾಜು ರೂ 15,290 ಕೋಟಿ) ಗೆ ಸ್ವಾಧೀನಪಡಿಸಿಕೊಂಡಿತು.

Comments

Leave a Comment

Prev Post ಶಾಸಕಾಂಗ ಸಭೆಯಲ್ಲಿ 'ಕೈ' ಮುಖಂಡರ ರಣತಂತ್ರ: ಉಪಚುನಾವಣೆ ಗೆಲ್ಲುವುದು ಅನಿವಾರ್ಯ; ನಾಯಕರಿಗೆ ಸುರ್ಜೇವಾಲಾ ಟಾರ್ಗೆಟ್!
Next Post 'ತನ್ನನ್ನು ಸರ್ವೋಚ್ಚ ನಾಯಕನನ್ನಾಗಿ ಮಾಡಲು ಇರಾನ್ ಬಯಸಿದೆ; ಆದರೆ ನಾನು ತಿರಸ್ಕರಿಸಿದೆ': ಡೊನಾಲ್ಡ್ ಟ್ರಂಪ್

ಜನಪ್ರತಿನಿಧಿಗಳ ಐಪಿಎಲ್ ಟಿಕೆಟ್ ಲಾಬಿ

ವಿಧಾನಸಭೆಯಲ್ಲಿ ವಿಐಪಿ ಟಿಕೆಟ್‌ಗಾಗಿ ಮುಗಿಬಿದ್ದ ಜನಪ್ರತಿನಿಧಿಗಳು; ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ, ವ್ಯವಸ್ಥೆಯ ವಿರುದ್ಧ ಗುಡುಗು!

ತುಮಕೂರಿನ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ಅಂತರಾಷ್ಟ್ರೀಯ ಮಹಿಳಾ ಟೆನಿಸ್ ಚಾಂಪಿಯನ್‌ಶಿಪ್‌ಗೆ ವೇದಿಕೆ ಸಜ್ಜು!

ಕ್ರೀಡಾ ನಗರಿಯಾಗುವತ್ತ ತುಮಕೂರಿನ ದಿಟ್ಟ ಹೆಜ್ಜೆ: ವಿಶ್ವದರ್ಜೆಯ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಲು ಸಿದ್ಧತೆ

IPL 2026: RCB ಗೆ ಸಿಕ್ಕಿದಾನಾ ಹೊಸ 'ಡಫಿ' ಡೈಮಂಡ್? ಚೊಚ್ಚಲ ಪಂದ್ಯದಲ್ಲೇ ತ್ರಿವಿಕ್ರಮ ಸಾಧನೆ!

ಹ್ಯಾಜಲ್‌ವುಡ್ ಚಿಂತೆ ದೂರ ಮಾಡಿದ ನ್ಯೂಜಿಲೆಂಡ್ ವೇಗಿ: ಚಿನ್ನಸ್ವಾಮಿಯಲ್ಲಿ ಜಾಕೋಬ್ ಡಫಿ ಅಬ್ಬರ!

IPL 2026: ಸಾಲ್ಟ್‌ನ ಸೂಪರ್‌ಹೀರೋ ಎಂಟ್ರಿ! ABD ನೆನಪಿಸಿದ ಅಸಾಮಾನ್ಯ ಕ್ಯಾಚ್‌ಗಳು!

ಸನ್‌ರೈಸರ್ಸ್ ವಿರುದ್ಧ RCB ಗೆಲುವಿಗೆ ಸಾಲ್ಟ್‌ನ ಮಾಂತ್ರಿಕ ಸ್ಪರ್ಶ! ಬೌಂಡರಿ ಲೈನ್‌ನಲ್ಲಿ ಚಿರತೆಯಂತೆ ಜಿಗಿದು ಹಿಡಿದ ಅದ್ಭುತ ಕ್ಯಾಚ್‌ಗಳು!

ಬೆಂಗಳೂರಿನಲ್ಲಿ ಆರ್‌ಸಿಬಿ 'ಸುನಾಮಿ': ಹೈದರಾಬಾದ್ ವಿರುದ್ಧ ಚೇಸಿಂಗ್ ದಾಖಲೆ ಬರೆದ ಬೆಂಗಳೂರು!

ಬ್ಯಾಟಿಂಗ್ ಅಬ್ಬರವನ್ನ ಕಣ್ತುಂಬಿಕೊಂಡ ಅಭಿಮಾನಿಗಳು : ಪಡೀಕಲ್-ವಿರಾಟ್ ಅಬ್ಬರಕ್ಕೆ ಧೂಳೀಪಟವಾಯ್ತು ಸನ್‌ರೈಸರ್ಸ್ ಕೋಟೆ!

ಅಂಪೈರ್‌ಗೆ ಜೀವ ಬೆದರಿಕೆ ಹಾಕಿದ್ರಾ ವಿಶ್ವಪ್ರಸಿದ್ಧ ಆ ಸ್ಟಾರ್ ವೇಗಿ?

ಮೊದಲ ಎಸೆತದಲ್ಲೇ 3 ಬಾರಿ ವಿಕೆಟ್ ಕಿತ್ತ ವಿಶ್ವ ದಾಖಲೆ ವೀರನಿಗೆ ಬಿತ್ತು ಬರೆ!

Read all News