ಕಾಮದ ಅಮಲೇರಿ ತಾಳಿ ಕಟ್ಟಿದ ಗಂಡನನ್ನೇ ಬಲಿಪಡೆದ ಕಿರಾತಕಿ: ಹಬ್ಬಕ್ಕೆ ಹೋದ ಹೆಂಡತಿಯನ್ನು ಕರೆತರಲು ಹೋದವನಿಗೆ ಕಾದಿತ್ತು ಘೋರ ಮೃತ್ಯು!

Mysuru Division:

Font size:

ಸರಸಕ್ಕೆ ಅಡ್ಡಿಯಾದ ಪತಿಗೆ ಎದೆಯ ಮೇಲೆ ಚಾಕು ಹಾಕಿದ ಪ್ರಿಯಕರ: ಹೆಂಡತಿಯೇ ಸ್ಕೆಚ್ ಹಾಕಿ ಮುಗಿಸಿದ ಗಂಡನ ಹೆಣ ರಸ್ತೆ ಬದಿಯಲ್ಲಿ ಪತ್ತೆ!

ಮೈಸೂರು: ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಪರಪುರುಷನ ಮೋಹಕ್ಕೆ ಬಿದ್ದ ಹೆಣ್ಣೊಬ್ಬಳು, ತನ್ನ ಅಕ್ರಮ ಸುಖಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂಬ ಒಂದೇ ಕಾರಣಕ್ಕೆ ಕರುಳು ಕಿತ್ತು ಬರುವಂತೆ ಗಂಡನನ್ನೇ ಕೊಲೆ ಮಾಡಿಸಿದ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದ ಜವರಪ್ಪ ಕೊಲೆಯಾದ ದುರ್ದೈವಿಯಾಗಿದ್ದು, ಈತನ ಸಾವಿನ ಹಿಂದೆ ತನ್ನದೇ ಹೆಂಡತಿಯ ಕ್ರೂರ ಹಸ್ತವಿರುವುದು ಈಗ ಬಯಲಾಗಿದೆ. ಪತ್ನಿ ಅಮೃತಾ ಮತ್ತು ಆಕೆಯ ಪ್ರಿಯಕರ ಸಿದ್ದೇಶ ಎಂಬ ಕಾಮಪಿಶಾಚಿಗಳು ಸೇರಿ ಈ ಕೃತ್ಯ ಎಸಗಿದ್ದು, ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

​ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದ ಜವರಪ್ಪ, ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾ ಎಂಬಾಕೆಯನ್ನು ಮದುವೆಯಾಗಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ, ಈ ನಡುವೆ ಅಮೃತಾಗೆ ಮೈಸೂರಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶನ ಪರಿಚಯವಾಗಿದೆ. ಈ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿ, ಇಬ್ಬರೂ ಗಂಡನ ಕಣ್ಣಿಗೆ ಮಣ್ಣೆರಚಿ ಸರಸವಾಡುತ್ತಿದ್ದರು. ಇತ್ತೀಚೆಗೆ ಈ ವಿಚಾರ ಜವರಪ್ಪನಿಗೆ ತಿಳಿದು ಮನೆಯಲ್ಲಿ ಗಲಾಟೆ ಶುರುವಾಗಿತ್ತು. ಇದರಿಂದ ಸಿಟ್ಟಿಗೆದ್ದ ಅಮೃತಾ, ತನ್ನ ಪ್ರಿಯಕರನ ಜೊತೆ ಶಾಶ್ವತವಾಗಿ ಒಂದಾಗಲು ಪತಿಯನ್ನೇ ಮುಗಿಸಲು ನಿರ್ಧರಿಸಿದ್ದಳು.

​ಸಂಚಿನ ಭಾಗವಾಗಿಯೇ 12 ದಿನಗಳ ಹಿಂದೆ ಹಬ್ಬದ ನೆಪದಲ್ಲಿ ಅಮೃತಾ ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದಳು. ಏಪ್ರಿಲ್ 16 ರಂದು ಜವರಪ್ಪ ತನ್ನ ಪತ್ನಿ ಮತ್ತು ಮಕ್ಕಳನ್ನು ಕರೆತರಲು ಅತ್ತೆ ಮನೆಗೆ ಹೋಗುವುದಾಗಿ ಮನೆಯವರಿಗೆ ಹೇಳಿ ಹೊರಟಿದ್ದರು. ಆದರೆ ದಾರಿಯಲ್ಲೇ ಹೊಂಚು ಹಾಕಿದ್ದ ಪ್ರಿಯಕರ ಸಿದ್ದೇಶ, ಅಮೃತಾ ನೀಡಿದ ಮಾಹಿತಿಯಂತೆ ಜವರಪ್ಪನನ್ನು ಅಡ್ಡಗಟ್ಟಿ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾನೆ. ಮಾರನೇ ದಿನ ಬೆಳಗ್ಗೆ ರಸ್ತೆ ಬದಿಯಲ್ಲಿ ಜವರಪ್ಪನ ರಕ್ತಸಿಕ್ತ ಶವ ಪತ್ತೆಯಾದಾಗ ಇಡೀ ಗ್ರಾಮವೇ ನಡುಗಿಹೋಗಿತ್ತು.

​ಶವ ಪತ್ತೆಯಾದ ಸ್ಥಳದಲ್ಲಿ ಅನುಮಾನಾಸ್ಪದ ಕುರುಹುಗಳು ಕಂಡುಬಂದ ಹಿನ್ನೆಲೆಯಲ್ಲಿ ಜವರಪ್ಪನ ಸಹೋದರ ರವಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಆಳಕ್ಕಿಳಿದ ಎಸ್ಪಿ ಅವರು ಮೂರು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿದ್ದರು. ಪೊಲೀಸರು ಅಮೃತಾಳ ಮೊಬೈಲ್ ಕರೆಗಳ ಮೇಲೆ ಕಣ್ಣಿಟ್ಟಾಗ ಅಸಲಿ ಸತ್ಯ ಹೊರಬಿದ್ದಿದೆ. ಗಂಡ ಸತ್ತ ಸುದ್ದ ಕೇಳಿದರೂ ಕಣ್ಣೀರು ಹಾಕದ ಅಮೃತಾಳ ನಡವಳಿಕೆ ಕಂಡು ಪೊಲೀಸರು ವಿಚಾರಣೆ ನಡೆಸಿದಾಗ, ಪ್ರಿಯಕರನ ಜೊತೆ ಸೇರಿ ಹೆಣೆದಿದ್ದ ಕೊಲೆ ಸಂಚನ್ನು ಒಪ್ಪಿಕೊಂಡಿದ್ದಾಳೆ. ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಸರಗೂರು ಪೊಲೀಸರ ಈ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತ್ತ ಹೆತ್ತ ತಂದೆ ಸಾವನ್ನಪ್ಪಿ, ಹಡೆದ ತಾಯಿ ಜೈಲು ಸೇರಿದ್ದರಿಂದ ಇಬ್ಬರು ಕಂದಮ್ಮಗಳು ಅನಾಥವಾಗಿವೆ.

Comments

Leave a Comment

Prev Post ಚಿತ್ರರಂಗದ ಕರಾಳ ಹಾದಿ: ಆ ನಿರ್ದೇಶಕ ನನ್ನನ್ನು ಅಸಭ್ಯವಾಗಿ ಮುಟ್ಟಿದ್ದ; ಕಾಸ್ಟಿಂಗ್ ಕೌಚ್ ಕಹಿ ನೆನಪು ಬಿಚ್ಚಿಟ್ಟ 'ಭದ್ರ' ನಟಿ ಡೈಸಿ ಶಾ!
Next Post ಲೈಕ್ಸ್ ಬೆನ್ನತ್ತಿ ಮೃತ್ಯುಲೋಕಕ್ಕೆ ಸೇರಿದ ಸಹೋದರರು: ರೀಲ್ಸ್ ಹುಚ್ಚಾಟಕ್ಕೆ ಬಲಿಯಾಯ್ತು ಮೂರು ಜೀವ!

ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಿನಿಮಾಗಳ ಹಿಂದಿಕ್ಕಿದ ‘ಕಾಂತಾರ 1’

Kantara Chapter 1 box office: ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ 100 ಕೋಟಿಯ ಗಡಿಯತ್ತ ಸಿನಿಮಾ ದಾಪುಗಾಲು ಹಾಕಿದ್ದು ಆಯಾ ರಾಜ್ಯಗಳಲ್ಲಿ ಕೆಲ ಹೊಸ ದಾಖಲೆಗಳನ್ನು ಸಹ ಬರೆದಿದೆ. ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರ ಹಿಟ್ ಸಿನಿಮಾಗಳ ಗಳಿಕೆಯ ದಾಖಲೆಗಳನ್ನೇ ಮುರಿದು ಹಾಕಿದೆ.

ಬಾರದ ಲೋಕಕ್ಕೆ ಹೋದ ‘ಉಷಾ’: ತಪ್ಪು ಒಪ್ಪಿಕೊಂಡರೂ ಮನ್ನಿಸಲಿಲ್ಲವೇ ಈ ಸಮಾಜ?

​"ನಾನು ತಪ್ಪು ಮಾಡಿದ್ದು ನಿಜ, ಆದ್ರೆ ಈ ಕಿರುಕುಳ ತಾಳಲಾರೆ.." - ಕಣ್ಣೀರು ಹಾಕುತ್ತಲೇ ಸಾವಿನ ಮನೆ ಸೇರಿದ ಅಬಲೆ!

ಧಾರವಾಡ ಸೆಂಟ್ರಲ್ ಜೈಲ್ 'ಡ್ರಗ್ಸ್' ದಂಧೆ ಅಡ್ಡ: ಬೇಲಿಯೇ ಎದ್ದು ಹೊಲ ಮೇಯ್ದ ರಣರೋಚಕ ಸ್ಟೋರಿ!

ಕತ್ತಲಲ್ಲಿ ಖೈದಿಗಳಿಗೆ 'ಕಿಕ್' ನೀಡುತ್ತಿದ್ದ ಖಾಕಿಧಾರಿಗಳು: ಮುತಾಲಿಕ್ ಎಚ್ಚರಿಕೆ ಬೆನ್ನಲ್ಲೇ ಪೊಲೀಸರ ಮಿಡ್‌ನೈಟ್ ಆಪರೇಷನ್ ಸಕ್ಸಸ್!

ಮಂಗಳೂರಿನಲ್ಲಿ ನೆತ್ತರು ಹರಿಸಿದ ಗ್ಯಾಂಗ್‌ವರ್: ತೊಕ್ಕೊಟ್ಟು ಫ್ಲೈಓವರ್ ಮೇಲೆ 'ಟಾಬ್ಲೆಟ್ ಆರಿಫ್' ಭೀಕರ ಕೊಲೆ!

ಸಿನಿಮೀಯ ಮಾದರಿಯಲ್ಲಿ ನಡೆದ ಹತ್ಯೆ: ಬೈಕ್ ಸವಾರನ ಮೇಲೆ ಕಾರ್ ಹರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾದ ದುಷ್ಕರ್ಮಿಗಳು!

ತುಂಗಭದ್ರಾ ನದಿಯ ಮಡಿಲಲ್ಲಿ ಕರಗಿದ ಕನಸುಗಳು: ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

ಮದುವೆಯ ಸಂಭ್ರಮದ ನಡುವೆ ಮರಣ ಮೃದಂಗ: ರಾಯಚೂರು ಕುಟುಂಬದಲ್ಲಿ ಆವರಿಸಿದ ಶೋಕದ ಕಾರ್ಮೋಡ

ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಯಲು: ಡಾ. ಸಮೀಕ್ಷಾ ರೆಡ್ಡಿ ಸಾವಿನ ಸುತ್ತ ನಿಗೂಢ ಜಾಲ!

ಅಲ್ಲಿ ಎಲ್ಲವೂ ಸರಿಯಿಲ್ಲ!" - ವೈದ್ಯೆಯ ಕೊನೆಯ ವಾಟ್ಸಪ್ ಸಂದೇಶಗಳು ಬಯಲು ಮಾಡಿದ ಭೀಕರ ವಾಸ್ತವ!

Read all News