ಡಿಎನ್‌ಎ ರಿಪೋರ್ಟ್‌ನಲ್ಲಿ 'ಬಿಜೆಪಿ ಪುತ್ರ'ನೇ ಅಪ್ಪ: ಹೈಕೋರ್ಟ್ ಗರಂ!

Dakshina Kannada:

Font size:

ಮದುವೆಯಾಗು ಇಲ್ಲವೇ ಮಾಸಿಕ ₹10 ಸಾವಿರ ಜೀವನಾಂಶ ನೀಡು; ಕಾಮದ ಅಮಲಿನಲ್ಲಿ ತೇಲಿ ಕೈಕೊಟ್ಟವನಿಗೆ ನ್ಯಾಯಾಧೀಶರ ಖಡಕ್ ವಾರ್ನಿಂಗ್!

ಬೆಂಗಳೂರು: ಪ್ರೀತಿಯ ನಾಟಕ, ಮದುವೆಯ ಸುಳ್ಳು ಭರವಸೆ, ಕಾಮದ ಹಸಿವು... ಕೊನೆಗೆ ಹುಟ್ಟಿದ ಮಗು ತನ್ನದಲ್ಲ ಎಂದು ವಾದಿಸಿದ ಬಿಜೆಪಿ ನಾಯಕನ ಪುತ್ರನ ಅಸಲಿಯತ್ತು ಈಗ ವಿಜ್ಞಾನದ ಮುಂದೆ ಬೆತ್ತಲಾಗಿದೆ! ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ತಾನೇ ಎಂದು ಸಾಬೀತಾಗಿದ್ದರೂ, ಮದುವೆಯಾಗಲು ನಖರಾ ಮಾಡುತ್ತಿರುವ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್‌ನಿಗೆ ಹೈಕೋರ್ಟ್ ಸರಿಯಾಗಿಯೇ ಬಿಸಿ ಮುಟ್ಟಿಸಿದೆ.

ಕಾಮದಾಟಕ್ಕೆ ಸಿಕ್ಕಿತು ಡಿಎನ್‌ಎ 'ದರ್ಪಣ'

​ತನ್ನ ಸಹಪಾಠಿಯನ್ನೇ ಪ್ರೀತಿಸಿ, ಮದುವೆಯ ಆಸೆ ತೋರಿಸಿ ಗರ್ಭಿಣಿಯನ್ನಾಗಿಸಿದ್ದ ಕೃಷ್ಣ ರಾವ್, ಮಗು ಜನಿಸಿದ ಬಳಿಕ "ನನಗೂ ಇದಕ್ಕೂ ಸಂಬಂಧವಿಲ್ಲ" ಎಂದು ಹಾರಿಕೆ ಉತ್ತರ ನೀಡಿದ್ದ. ಆದರೆ, ವಿಜ್ಞಾನ ಆತನ ಸುಳ್ಳನ್ನು ಬಯಲು ಮಾಡಿದೆ. ರಕ್ತದ ಮಾದರಿಗಳನ್ನು ಬೆಂಗಳೂರಿನ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ರಿಪೋರ್ಟ್ 'ಪಾಸಿಟಿವ್' ಬಂದಿದೆ. ಅಂದರೆ, ಸಂತ್ರಸ್ತ ಯುವತಿಯ ಮಗುವಿನ ತಂದೆ ಮತ್ಯಾರೂ ಅಲ್ಲ, ಇದೇ ಕೃಷ್ಣ ರಾವ್ ಎಂಬುದು ಈಗ ದೃಢಪಟ್ಟಿದೆ.

ಕೋರ್ಟ್ ಕಟಕಟೆಯಲ್ಲಿ 'ಕೃಷ್ಣ'ನ ಲೀಲೆ!

​ತನ್ನ ವಿರುದ್ಧದ ಕ್ರಿಮಿನಲ್ ಕೇಸ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಚಳಿ ಬಿಡಿಸಿದೆ.

​"ಮಗು ನಿನ್ನದೇ ಎಂದು ಸಾಬೀತಾಗಿರುವಾಗ ಆ ತಾಯಿ ಮತ್ತು ಮಗುವನ್ನು ಅನಾಥ ಮಾಡುವುದು ಸರಿಯಲ್ಲ. ತಂದೆಯಾಗಿ ಮಗುವಿನ ಜವಾಬ್ದಾರಿ ಹೊರುವುದು ನಿನ್ನ ಕರ್ತವ್ಯ. ಮದುವೆಯಾಗಲು ಒಪ್ಪದಿದ್ದರೆ, ಆ ಯುವತಿಗೆ ಮಾಸಿಕ 10 ಸಾವಿರ ರೂಪಾಯಿ ಜೀವನಾಂಶ ನೀಡುತ್ತೀಯಾ?" ಎಂದು ನ್ಯಾಯಪೀಠ ನೇರವಾಗಿಯೇ ಪ್ರಶ್ನಿಸಿದೆ.


ರಾಜಕೀಯ ಪ್ರತಿಷ್ಠೆ vs ಹೆಣ್ಣಿನ ಕಣ್ಣೀರು

​ಆರೋಪಿ ಪರ ವಕೀಲರು ಇದೊಂದು ರಾಜಕೀಯ ಷಡ್ಯಂತ್ರ, ತಂದೆಯ ತೇಜೋವಧೆ ಮಾಡಲು ಹೀಗೆ ಮಾಡಲಾಗುತ್ತಿದೆ ಎಂದು ವಾದಿಸಿದರೂ, ಡಿಎನ್‌ಎ ವರದಿಯ ಮುಂದೆ ಅವರ ವಾದ ಮಂಕಾಗಿದೆ. ಈ ಹಿಂದೆ ವಯಸ್ಸಿನ ನೆಪ ಹೇಳಿ ಮದುವೆಯಿಂದ ತಪ್ಪಿಸಿಕೊಂಡಿದ್ದ ಕೃಷ್ಣ ರಾವ್, 21 ವರ್ಷ ತುಂಬಿದ ಬಳಿಕ ಸಂಪೂರ್ಣವಾಗಿ ಮುಖ ತಿರುಗಿಸಿದ್ದ. ಬಿಜೆಪಿ ಪ್ರಮುಖ ಮುಖಂಡರು ನಡೆಸಿದ ಸಂಧಾನವೂ ವಿಫಲವಾಗಿತ್ತು.

ಮುಂದೇನು?

ಈಗ ನ್ಯಾಯಾಲಯವು ಆರೋಪಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಏಪ್ರಿಲ್ 24ರವರೆಗೆ ಗಡುವು ನೀಡಿದೆ. ಮದುವೆಯಾಗುವ ಮೂಲಕ ಮಗುವಿಗೆ ತಂದೆಯ ಹೆಸರನ್ನು ನೀಡಿ ಗೌರವಯುತವಾಗಿ ಬಾಳುತ್ತಾನೋ ಅಥವಾ ತಿಂಗಳಿಗೆ ಹತ್ತು ಸಾವಿರ ಎಸೆದು ತನ್ನ 'ಜವಾಬ್ದಾರಿ'ಯಿಂದ ನುಣುಚಿಕೊಳ್ಳುತ್ತಾನೋ ಎನ್ನುವುದನ್ನು ಕಾದು ನೋಡಬೇಕಿದೆ.

ಬಾಕ್ಸ್ ನ್ಯೂಸ್: ನಂಬಿಸಿ ಕುತ್ತಿಗೆ ಕುಯ್ದ ಕಥೆ

  • ಆರೋಪಿ: ಕೃಷ್ಣ ಜೆ. ರಾವ್ (ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ).
  • ಆರೋಪ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಕೈಕೊಟ್ಟಿದ್ದು.
  • ಟ್ವಿಸ್ಟ್: ಕಳೆದ ವರ್ಷ ಜೂನ್ 28ಕ್ಕೆ ಮಗು ಜನನ, ಮಗು ತನ್ನದಲ್ಲ ಎಂದು ವಾದಿಸಿದ್ದ ಆರೋಪಿ.
  • ಕ್ಲೈಮ್ಯಾಕ್ಸ್: ಡಿಎನ್‌ಎ ವರದಿಯಲ್ಲಿ ಆರೋಪಿಯೇ ತಂದೆ ಎಂದು ಸಾಬೀತು.

Comments

Leave a Comment

Prev Post ಐಆರ್‌ಎಸ್ ಅಧಿಕಾರಿಯ ಮಗಳ ಮೇಲೆ ಅತ್ಯಾಚಾರ ಮಾಡಿ ಕೊಂದ ಮಾಜಿ ಕೆಲಸಗಾರ: ದೆಹಲಿಯಲ್ಲಿ ನಡುಕ ಹುಟ್ಟಿಸಿದ ನರರೂಪದ ರಾಕ್ಷಸ!
Next Post ಮಗನ 'ಬಂಗಾರ'ದ ಸಂಭ್ರಮ ನೋಡಲು ಬಂದ ತಂದೆ ಮಸಣದ ಪಾಲು: ವಿಧಿಯಾಟಕ್ಕೆ ಹೂವಿನ ಹಾರದ ಬದಲು ಹೆಣದ ಬುತ್ತಿಯಾದರು..!

ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಿನಿಮಾಗಳ ಹಿಂದಿಕ್ಕಿದ ‘ಕಾಂತಾರ 1’

Kantara Chapter 1 box office: ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ 100 ಕೋಟಿಯ ಗಡಿಯತ್ತ ಸಿನಿಮಾ ದಾಪುಗಾಲು ಹಾಕಿದ್ದು ಆಯಾ ರಾಜ್ಯಗಳಲ್ಲಿ ಕೆಲ ಹೊಸ ದಾಖಲೆಗಳನ್ನು ಸಹ ಬರೆದಿದೆ. ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರ ಹಿಟ್ ಸಿನಿಮಾಗಳ ಗಳಿಕೆಯ ದಾಖಲೆಗಳನ್ನೇ ಮುರಿದು ಹಾಕಿದೆ.

ಬಾರದ ಲೋಕಕ್ಕೆ ಹೋದ ‘ಉಷಾ’: ತಪ್ಪು ಒಪ್ಪಿಕೊಂಡರೂ ಮನ್ನಿಸಲಿಲ್ಲವೇ ಈ ಸಮಾಜ?

​"ನಾನು ತಪ್ಪು ಮಾಡಿದ್ದು ನಿಜ, ಆದ್ರೆ ಈ ಕಿರುಕುಳ ತಾಳಲಾರೆ.." - ಕಣ್ಣೀರು ಹಾಕುತ್ತಲೇ ಸಾವಿನ ಮನೆ ಸೇರಿದ ಅಬಲೆ!

ಧಾರವಾಡ ಸೆಂಟ್ರಲ್ ಜೈಲ್ 'ಡ್ರಗ್ಸ್' ದಂಧೆ ಅಡ್ಡ: ಬೇಲಿಯೇ ಎದ್ದು ಹೊಲ ಮೇಯ್ದ ರಣರೋಚಕ ಸ್ಟೋರಿ!

ಕತ್ತಲಲ್ಲಿ ಖೈದಿಗಳಿಗೆ 'ಕಿಕ್' ನೀಡುತ್ತಿದ್ದ ಖಾಕಿಧಾರಿಗಳು: ಮುತಾಲಿಕ್ ಎಚ್ಚರಿಕೆ ಬೆನ್ನಲ್ಲೇ ಪೊಲೀಸರ ಮಿಡ್‌ನೈಟ್ ಆಪರೇಷನ್ ಸಕ್ಸಸ್!

ಮಂಗಳೂರಿನಲ್ಲಿ ನೆತ್ತರು ಹರಿಸಿದ ಗ್ಯಾಂಗ್‌ವರ್: ತೊಕ್ಕೊಟ್ಟು ಫ್ಲೈಓವರ್ ಮೇಲೆ 'ಟಾಬ್ಲೆಟ್ ಆರಿಫ್' ಭೀಕರ ಕೊಲೆ!

ಸಿನಿಮೀಯ ಮಾದರಿಯಲ್ಲಿ ನಡೆದ ಹತ್ಯೆ: ಬೈಕ್ ಸವಾರನ ಮೇಲೆ ಕಾರ್ ಹರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾದ ದುಷ್ಕರ್ಮಿಗಳು!

ತುಂಗಭದ್ರಾ ನದಿಯ ಮಡಿಲಲ್ಲಿ ಕರಗಿದ ಕನಸುಗಳು: ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

ಮದುವೆಯ ಸಂಭ್ರಮದ ನಡುವೆ ಮರಣ ಮೃದಂಗ: ರಾಯಚೂರು ಕುಟುಂಬದಲ್ಲಿ ಆವರಿಸಿದ ಶೋಕದ ಕಾರ್ಮೋಡ

ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಯಲು: ಡಾ. ಸಮೀಕ್ಷಾ ರೆಡ್ಡಿ ಸಾವಿನ ಸುತ್ತ ನಿಗೂಢ ಜಾಲ!

ಅಲ್ಲಿ ಎಲ್ಲವೂ ಸರಿಯಿಲ್ಲ!" - ವೈದ್ಯೆಯ ಕೊನೆಯ ವಾಟ್ಸಪ್ ಸಂದೇಶಗಳು ಬಯಲು ಮಾಡಿದ ಭೀಕರ ವಾಸ್ತವ!

Read all News