ಜನಪ್ರತಿನಿಧಿಗಳ ಐಪಿಎಲ್ ಟಿಕೆಟ್ ಲಾಬಿ

Bengaluru Urban:

Font size:

ವಿಧಾನಸಭೆಯಲ್ಲಿ ವಿಐಪಿ ಟಿಕೆಟ್‌ಗಾಗಿ ಮುಗಿಬಿದ್ದ ಜನಪ್ರತಿನಿಧಿಗಳು; ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ, ವ್ಯವಸ್ಥೆಯ ವಿರುದ್ಧ ಗುಡುಗು!

ಬೆಂಗಳೂರು: ಐಪಿಎಲ್ ಪಂದ್ಯಗಳ ಟಿಕೆಟ್‌ಗಳಿಗಾಗಿ ವಿಧಾನಸಭೆಯಲ್ಲಿ ಶಾಸಕರು ಪಕ್ಷಭೇದ ಮರೆತು 'ಉಚಿತ ವಿಐಪಿ ಟಿಕೆಟ್‌'ಗಾಗಿ ನಡೆಸಿದ ಹಪಾಹಪಿ, ಕಳೆದ ಬಾರಿ ಆರ್‌ಸಿಬಿ ವಿಜಯೋತ್ಸವದ ಸಂಭ್ರಮದ ನಡುವೆ 11 ಅಮಾಯಕ ಯುವಕರನ್ನು ಬಲಿ ತೆಗೆದುಕೊಂಡ ಭೀಕರ ಕಾಲ್ತುಳಿತದ ಕರಾಳ ನೆನಪುಗಳನ್ನು ಕೆದಕಿದೆ. ಈ ಘಟನೆಯಿಂದ ತೀವ್ರ ಆಕ್ರೋಶಗೊಂಡಿರುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, "ಜನರ ಜೀವ ಮುಖ್ಯವೋ? ವಿಐಪಿ ಟಿಕೆಟ್ ಮುಖ್ಯವೋ?" ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ತಮ್ಮ ಟ್ವೀಟ್ ಮೂಲಕ ವ್ಯವಸ್ಥೆಯ ವಿರುದ್ಧ ಗುಡುಗಿರುವ ನಿಖಿಲ್, "ಕಳೆದ ಬಾರಿ ನಡೆದ ಕಾಲ್ತುಳಿತದಲ್ಲಿ 11 ಅಮಾಯಕ ಯುವಕರು ಪ್ರಾಣ ಕಳೆದುಕೊಂಡಿದ್ದರು. ಆ ಹನ್ನೊಂದು ಕುಟುಂಬಗಳ ಕಣ್ಣೀರು ಇಂದಿಗೂ ಆರಿಲ್ಲ. ಆದರೆ, ಆ ದುರಂತಕ್ಕೆ ಕಾರಣರಾದ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಆಗಲಿ ಅಥವಾ ಕೆಎಸ್‌ಸಿಎ (KSCA) ಆಗಲಿ ಇದುವರೆಗೂ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ಆ ಕುಟುಂಬಗಳಿಗೆ ಕನಿಷ್ಠ ನ್ಯಾಯವೂ ಸಿಕ್ಕಿಲ್ಲ ಎಂಬುದು ವ್ಯವಸ್ಥೆಯ ಅತಿದೊಡ್ಡ ವೈಫಲ್ಯ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನರ ತೆರಿಗೆ ಹಣದಲ್ಲಿ ಸವಲತ್ತುಗಳನ್ನು ಅನುಭವಿಸುತ್ತಿರುವ, ಕೇವಲ ₹1,600 ಬಾಡಿಗೆಗೆ 16 ಎಕರೆ ಸರ್ಕಾರಿ ಭೂಮಿಯನ್ನು ಅನುಭವಿಸುತ್ತಿರುವ ಕೆಎಸ್‌ಸಿಎ ಸಂಸ್ಥೆ, ಸಾಮಾನ್ಯ ಜನರ ಸುರಕ್ಷತೆಯನ್ನು ಗಾಳಿಗೆ ತೂರಿ ಟಿಕೆಟ್ ಹೆಸರಿನಲ್ಲಿ ಲೂಟಿ ಮಾಡುತ್ತಿದೆ ಎಂದು ನಿಖಿಲ್ ಆರೋಪಿಸಿದ್ದಾರೆ. ಇಂತಹ ಸಮಯದಲ್ಲಿ ಜನರ ಪರವಾಗಿ ಧ್ವನಿ ಎತ್ತಬೇಕಾದ ಜನಪ್ರತಿನಿಧಿಗಳು ಕೇವಲ ತಮ್ಮ ವೈಯಕ್ತಿಕ ಸೌಲಭ್ಯಗಳಿಗಾಗಿ ಚರ್ಚಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.

"ಒಬ್ಬ ಯುವಕನಾಗಿ ನಾನು ಕೇಳಬಯಸುತ್ತೇನೆ: ನಮ್ಮ ಯುವಕರ ಜೀವಕ್ಕಿಂತ ನಮಗೆ ಐಪಿಎಲ್ ಟಿಕೆಟ್‌ಗಳೇ ದೊಡ್ಡದಾದವೇ? ಸಾಮಾನ್ಯ ಜನರ ರಕ್ತ ಹರಿಸಿ ಕಟ್ಟುವ ಕ್ರೀಡಾಂಗಣದಲ್ಲಿ ಅವರಿಗೆ ಬೆಲೆ ಇಲ್ಲವೇ?" ಎಂದು ಪ್ರಶ್ನಿಸಿರುವ ನಿಖಿಲ್, "ಉಚಿತ ಟಿಕೆಟ್‌ಗಳು ಬೇಡ, ಆ 11 ಯುವಕರ ಸಾವಿಗೆ ಕಾರಣರಾದವರ ಮೇಲೆ ತಕ್ಷಣ ಕಠಿಣ ಕಾನೂನು ಕ್ರಮವಾಗಲಿ. ಅಧಿಕಾರ ಇರುವುದು ಜನರ ಸೇವೆಗಾಗಿಯೇ ಹೊರತು, ಮೋಜು-ಮಸ್ತಿಗಾಗಿ ಅಲ್ಲ!" ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ.

Comments

Leave a Comment

Prev Post ಮಂಗಳೂರಿನಲ್ಲಿ ನೆತ್ತರು ಹರಿಸಿದ ಗ್ಯಾಂಗ್‌ವರ್: ತೊಕ್ಕೊಟ್ಟು ಫ್ಲೈಓವರ್ ಮೇಲೆ 'ಟಾಬ್ಲೆಟ್ ಆರಿಫ್' ಭೀಕರ ಕೊಲೆ!
Next Post ಇಸ್ರೇಲ್ ಸೋತರೆ ರಣಾಂಗಣಕ್ಕೆ ಉಗಾಂಡಾ! - ಜಗತ್ತನ್ನೇ ಬೆಚ್ಚಿಬೀಳಿಸಿದ ಸೇನಾ ಮುಖ್ಯಸ್ಥನ ಎಚ್ಚರಿಕೆ!

IPL ಇತಿಹಾಸದಲ್ಲೇ ಅತಿದೊಡ್ಡ ಮಾರಾಟ: 16,000 ಕೋಟಿ ರೂ ಗೆ RCB ಸೇಲ್; ಹೊಸ ಮಾಲೀಕರು ಯಾರು ಗೊತ್ತಾ?

ಭಾರತೀಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್‌ನ ಬೋಲ್ಟ್ ವೆಂಚರ್ಸ್ ಮತ್ತು ಯುಎಸ್ ಮೂಲದ ಬ್ಲಾಕ್‌ಸ್ಟೋನ್ ಒಳಗೊಂಡಿರುವ ಕನ್ಸೋರ್ಟಿಯಂ ಹೊಸ ಮಾಲೀಕರಾಗಿದ್ದಾರೆ

ತುಮಕೂರಿನ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ಅಂತರಾಷ್ಟ್ರೀಯ ಮಹಿಳಾ ಟೆನಿಸ್ ಚಾಂಪಿಯನ್‌ಶಿಪ್‌ಗೆ ವೇದಿಕೆ ಸಜ್ಜು!

ಕ್ರೀಡಾ ನಗರಿಯಾಗುವತ್ತ ತುಮಕೂರಿನ ದಿಟ್ಟ ಹೆಜ್ಜೆ: ವಿಶ್ವದರ್ಜೆಯ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಲು ಸಿದ್ಧತೆ

Read all News