ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸುಕ್ಷೇತ್ರ ಮೇಲುಕೋಟೆ ಈಗ ದೈವಿಕ ಕಳೆಯನ್ನು ಹೊತ್ತು ನಿಂತಿದೆ.
ನಾಳೆ ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ! ಆ ರಕ್ಷಕನ ಮಸ್ತಕದ ಮೇಲೆ ವಜ್ರಖಚಿತ ವೈರಮುಡಿ ಕಿರೀಟ ಕಂಗೊಳಿಸುವ ಆ ಕ್ಷಣಕ್ಕೆ ಇಡೀ ನಾಡು ಕಾತರದಿಂದ ಕಾಯುತ್ತಿದೆ.. ನಾಳೆ ರಾತ್ರಿ ಸರಿಯಾಗಿ 8 ಗಂಟೆಗೆ ಮೇಲುಕೋಟೆಯ ಆರಾಧ್ಯ ದೈವ ಚೆಲುವನಾರಾಯಣನಿಗೆ ವೈರಮುಡಿ ಕಿರೀಟ ಧಾರಣೆ ಮಾಡಲಾಗುವುದು. ಈ ಭವ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತವು ಹಬ್ಬದ ಸಿದ್ಧತೆಯನ್ನು ಅದ್ದೂರಿಯಾಗಿ ಮಾಡಿಕೊಂಡಿದೆ.. ಮುಖ್ಯ ಆಕರ್ಷಣೆಗಳು ಮತ್ತು ಸಿದ್ಧತೆಗಳು:
ಬಸ್ ವ್ಯವಸ್ಥೆ: ಭಕ್ತರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯಿಂದ ಸುಮಾರು 150ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ದಾಸೋಹ: ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ನಿರಂತರವಾಗಿ ಅನ್ನದಾಸೋಹ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.
ಅಲಂಕಾರ: ಇಡೀ ದೇವಸ್ಥಾನವು ಹೂವಿನ ಪರಿಮಳ ಮತ್ತು ಮಿನುಗುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಬಿಗಿ ಭದ್ರತೆ:
ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಕಣ್ಗಾವಲು ಇಟ್ಟಿದೆ. 2 ASP, 6 DYSP ಸೇರಿದಂತೆ ಒಟ್ಟು 1,210 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಜೊತೆಗೆ 40ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಮೂಲಕ ಪ್ರತಿ ಚಟುವಟಿಕೆಯ ಮೇಲೆ ನಿಗಾ ವಹಿಸಲಾಗಿದೆ.
ಡಿಸಿ ಮನವಿ:
ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀಲಕ್ಷ್ಮೀನಾರಾಯಣನ ಕೃಪೆಗೆ ಪಾತ್ರರಾಗಬೇಕೆಂದು ಮಂಡ್ಯ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ನಿಮ್ಮ ಭಕ್ತಿ, ನಿಮ್ಮ ನಂಬಿಕೆ - ಈ ಬಾರಿಯ ವೈರಮುಡಿ ಉತ್ಸವ ಎಂದಿಗಿಂತಲೂ ವಿಶೇಷವಾಗಿರಲಿದೆ. ನಿರಂತರ ಅಪ್‌ಡೇಟ್ಸ್‌ಗಳಿಗಾಗಿ ನೋಡ್ತಾ ಇರಿ ಒಳನೋಟ.ಡಾಂ









Comments
Leave a Comment